ಬಾಗಲಕೋಟ ಜಿಲ್ಲೆಯ ಬೀಳಗಿ ಪೋಲಿಸ್ ಠಾಣಾ ವ್ಯಾಪ್ತಿಯ ಕೊಪ್ಪ ಎಸ್‌ಕೆ ಗ್ರಾಮದ ಹೊರ ವಲಯದಲ್ಲಿ ಇರುವ ಶ್ರೀಗುರು ಗಂಗಾಧರ ಹಾಗೂ ಚಂದ್ರಗಿರಿ ದೇವಿಯ ದೇವಸ್ಥಾನದಲ್ಲಿ ದೇವರು ಗದ್ದಿಗೆಗ ಹಾಕಿದ ಕೀಲಿಯನ್ನು ಯಾರೋ ಕಳ್ಳರು ಜಖಂಡಗೊಳಿಸಿ ದೇವಸ್ಥಾನದ ಒಳಗೆ ಹೊಕ್ಕು ಗದ್ದುಗೆಯಲ್ಲಿ ಇದ್ದ ೩೬೯೯೮೦ ರೂ ಕಿಮತ್ತಿನ ಎರಡು ಬೆಳ್ಳಿಯ ಮೂರ್ತಿಗಳು ಹಾಗೂ ಮೂರು ಬೆಳ್ಳಿ ಕಣ್ಣುಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ. ಈ ಕುರಿತು ಬೀಳಗಿ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸಿದ್ದಾರೆ ಎಂದು ಅಗಸ್ಟ ೨೩ ಮಧ್ಯಾಹ್ನ ೧ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.