ಎಚ್.ಡಿ. ಕೋಟೆ ಪೊಲೀಸರು ಅನ್ನಭಾಗ್ಯ ಅಕ್ಕಿಯನ್ಮು ಅಕ್ರಮವಾಗಿ ಸಾಗಿಸುತ್ತಿದ್ದ ಟೆಂಪೋವನ್ನು ಮಾಲು ಸಮೇತ ವಶಪಡಿಸಿಕೊಂಡಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಹ್ಯಾಂಡ್ ಬಳಿ ಈ ವಾಹನವನ್ನು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ತಂಡ ತಡೆದು ಪರಿಶೀಲನೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಅನ್ಬಭಾಗ್ಯ ಅಕ್ಕಿಯನ್ನು ಲಿಂಗಣ್ಣ ಟ್ರೇಡರ್ಸ್ ನಿಂದ ಕೊಂಡೊಯ್ಯಲಾಗುತ್ತಿತ್ತು ಎಂಬಾ ಮಾಹಿತಿ ಆಧರಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.