ಶಿರಸಿ : ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಬುಧವಾರ ವಿವಿಧೆಡೆ ಮನೆ, ಅಡಿಕೆ ತೋಟಗಳಿಗೆ ಹಾನಿಯಾದ ಕುರಿತು ವರದಿಯಾಗಿದೆ. ಮಧುರವಳ್ಳಿಯ ಗೀತಾ ಶಶಿಧರ್ ನಾಯ್ಕ ಮನೆಯ ಮೇಲೆ ರಭಸವಾಗಿ ಬೀಸಿದ ಗಾಳಿ ಮಳೆಯಿಂದಾಗಿ ವಾಸ್ತವ್ಯದ ಮನೆಯ ಹಂಚು ಬಿದ್ದು ಅಂದಾಜು ೧೦ ಸಾವಿರ ಹಾನಿ ಸಂಭವಿಸಿದೆ. ಅದೇ ರೀತಿ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕೊಪ್ಪ ಗ್ರಾಮದ ಮೇಲಿನ ಇಡ್ತಳ್ಳಿ ಮಜಿರೆಯಲ್ಲಿರುವ ಕೆರೆಯ ಧರೆ ಕುಸಿದು ನೀರು ಹೊರಹೋಗುತ್ತಿದ್ದು ಪಕ್ಕದಲ್ಲಿರುವ ಅಡಿಕೆ ತೋಟಗಳಿಗೆ ಮುಂದಿನ ದಿನಗಳಲ್ಲಿ ಹಾನಿಯಾಗುವ ಸಾಧ್ಯತೆಗಳಿದೆ.