ಹಾಡು ಹಗಲಲ್ಲೇ ಸೋಮವಾರ 2 ಗಂಟೆ ಸುಮಾರಿನಲ್ಲಿ ಮನೆಗೆ ನುಗ್ಗಿ ಒಡವೆಗಳನ್ನು ಕದ್ದು ಪರಾರಿಯಾದ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಟ್ಟೆಜ್ಜನ ಕಪ್ಲೆ ಗ್ರಾಮದ ಶ್ರೀನಿವಾಸ್ ಮನೆಗೆ ಬೀಗಾ ಹಾಕಿಕೊಂಡು ಜಮೀನಿಗೆ ಹೋಗಿ ಮರಳಿ ಮನೆಗೆ ಬರುವ ಅರ್ಧ ಗಂಟೆಯೊಳಗೆ ಮನೆ ಬೀಗ ಹೊಡೆದು ನುಗ್ಗಿ 45 ಗ್ರಾಂ ತೂಕದ ಚಿನ್ನದ ಲಾಂಗ್ ಸರ ಹಾಗೂ 4 ಜೊತೆ ಕಿವಿಯೋಲೆ ಸೆಟೆಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಒಂದು ಬೈಕ್ ನಲ್ಲಿ ಇಬ್ಬರು ಅಪರಿಚಿತರ ಎಲಿಮೆಂಟ್ ಹಾಕಿಕೊಂಡು ಸುತ್ತಾಡುತ್ತಿರು ಎನ್ನಲಾಗಿದೆ.