ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವ ಸಂಸ್ಕೃತಿ ಅಭಿಯಾನ ಮೂರನೇ ಸುತ್ತಿನ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಜಗದ್ಗುರು ಸಾರಂಗದೇಶಿಕೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು. ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಶಾಸಕರು ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ ಹಾಗೂ ಅಮರನಾಥ್ ಪಾಟೀಲ ಮಾತನಾಡಿ ಅಭಿಯಾನ ಯಶಸ್ವಿಗೆ ಎಲ್ಲ ಶರಣ ಬಂಧುಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು. ಮಹಾಸ್ವಾಮಿಗಳು ಕಾರ್ಯಚಟುವಟಿಕೆ ಬಲಪಡಿಸಲು ಸಮಿತಿಗಳನ್ನು ರಚಿಸಿ ತಕ್ಷಣ ಕಾರ್ಯಾರಂಭ ಮಾಡಲು ಸೂಚಿಸಿದರು. ಸಭೆಯಲ್ಲಿ ಹಲವಾರು ಗಣ್ಯರು ಹಾಜರಿದ್ದರು.