ಪ್ರತಾಪ್ ಸಿಂಹನನ್ನ ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿ ಬಿಟ್ಟಿದ್ದಾರಲ್ಲ. ಅದಕ್ಕೆ ಕೋರ್ಟ್ ವರೆಗೆ ಹೋಗಿರಬೇಕು. ದಸರಾ ಉದ್ಘಾಟನೆ ವಿಚಾರ ಕೋರ್ಟ್ನಲ್ಲೇ ತೀರ್ಮಾನ ಆಗಲಿ ಬಿಡಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಸೋಮವಾರ ವಿಧಾನಸೌಧದ ಬಳಿ ಮಾತನಾಡಿದ ಅವರು, ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ ಪ್ರತಾಪ್ ಸಿಂಹ ಕೋರ್ಟ್ ಗೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈದರಾಲಿ, ಟಿಪ್ಪು, ಮಿರ್ಜಾ ಇಸ್ಮಾಯಿಲ್, ನಿಸಾರ್ ಅಹಮದ್ ಅವರ ಬಗ್ಗೆ ಬಿಜೆಪಿ ಅವರು ಕೋರ್ಟ್ಗೆ ಹೋಗಿರಲಿಲ್ಲ. ಪ್ರತಾಪ್ ಸಿಂಹ ಅವರನ್ನು ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿದ್ದಾರಲ್ಲ. ಅದಕ್ಕೆ ಕೋರ್ಟ್ ವರೆಗೆ ಹೋಗಿರಬೇಕು ಎಂದು ವ್ಯಂಗ್ಯವಾಡಿದರು.