ಅಗಸ್ಟ ೩೦ ಮಧ್ಯಾಹ್ನ ೧೨ ಗಂಟೆಗೆ ಬಾಗಲಕೋಟ ಜಿಲ್ಲೆಯ ಇಳಕಲ್ಲ ನಗರದಲ್ಲಿ ನಾಯಿಯೊಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಇದ್ದ ತಿನ್ನಸನ್ನು ತಿನ್ನಲು ಹೋದಾಗ ಅದರ ಮುಖಕ್ಕೆ ಪ್ಲಾಸ್ಟಿಕ್ ಡಬ್ಬಿಯೊಂದು ಸಿಲುಕಿಕೊಂಡು ನಗರದ ತುಂಬೆಲ್ಲಾ ಓಡಾಡಿದ ಘಟನೆಯೊಂದು ನಡೆದಿದೆ. ಕಳೆದ ಮೂರು ದಿನಗಳಿಂದ ನಾಯಿ ಮುಖಕ್ಕೆ ಸಿಲುಕಿಕೊಂಡಿರುವ ಡಬ್ಬಿಯೊಂದಿಗೆ ನಗರದ ತುಂಬೆಲ್ಲಾ ಓಡಾಡುತ್ತಿರುವದನ್ನು ನೋಡಿದ ಸಾರ್ವಜನಿಕರು ಡಬ್ಬಿಯನ್ನು ತೆಗೆಯಲು ಹಲವಾರು ಯುವಕರು ಹರಸಹಾಸವನ್ನು ಪಟ್ಟರು ನಾಯಿ ಯಾರ ಕೈಗೂ ಸಿಗುತ್ತಿರಲಿಲ್ಲ. ಶುಕ್ರವಾರದಂದು ವಾರ್ಡನಂ. ೦೪ ರಲ್ಲಿ ಕಾಣಿಸಿಕೊಂಡ ನಾಯಿಯನ್ನು ನೋಡಿದ ಸ್ಥಳೀಯ ಯುವಕರ ಗುಂಪೋದು ಎರಡು ಗಂಟೆಗಳ ಕಾಲ ನಾಯಿಯನ್ನು ಹಿಡಿಯುವ ಕಾರ್ಯಾಚರಣೆಯನ್ನು ನಡೆಸಿ ಮುಖಕ್ಕೆ ಸಿಲುಕಿಕೊಂಡಿರುವ ಡಬ್ಬಿ