ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ರೈತರು ಧಾರಾಕಾರ ಮಳೆಯ ಹೊಡೆತಕ್ಕೆ ತತ್ತರಿಸಿದ್ದಾರೆ. ಜೀವನಾಧಾರವಾಗಿದ್ದ ಹೆಸರು ಬೆಳಲೆಯನ್ನು, ರಾಶಿ ಮಾಡಿ ಕಾಳು ಒಣಗಲು ಹಾಕಿದ್ದಾಗ ನೀರಿನಲ್ಲಿ ನೆನೆದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇಡೀ ರಾತ್ರಿ ಸುರಿದ ಭಾರೀ ಮಳೆಯಿಂದ ದರ್ಗಾ ಪಕ್ಕದ ಬೃಹತ್ ಹಳ್ಳ ಉಕ್ಕಿ ಹರಿದು ದರ್ಗಾ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ದರ್ಗಾ ಆವರಣದಲ್ಲಿ ಒಣಹಾಕಿದ ಹೆಸರು ಕಾಳು ಸಂಪೂರ್ಣ ನೀರು ಪಾಲಾಗಿದೆ. ಸುಮಾರು 300 ಕ್ವಿಂಟಲ್‌ಗೂ ಹೆಚ್ಚು ಹೆಸರು ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಈ ಬೆಳೆ ಕಣ್ಣೆದುರೇ ನಾಶವಾಗುತ್ತಿದ್ದಂತೆಯೇ ರೈತರ ಹೃದಯ ಕಣ್ಣೀರಿನಿಂದ ತುಂಬಿದೆ. ಬಡಪಾಯಿ ರೈತರು ಸರ್ಕಾರದತ್ತ ಮುಖಮಾಡಿದ್ದಾರೆ. ನಮ್ಮ ನೇರವಿಗೆ ಬನ್ನಿ ಅಂತ ಗುರುವಾ