ಅಕ್ಟೋಬರ್ 9 ರಂದು ನಡೆಯಲಿರುವ ಶಿಕಾರಿಪುರ ಬಂದ್ ಯಶಸ್ವಿಯಾಗಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸಾಗರ ನಗರದಲ್ಲಿ ಭಾನುವಾರ ಸಂಜೆ 5 ಗಂಟೆಗೆ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕಿನ ಕೊಟ್ರಳ್ಳಿ ಬಳಿ ಅಂದರೆ ಅಂಬಾರಗೊಪ್ಪ ಮತ್ತು ಕಣಿವೆ ಮನೆ ಮಧ್ಯ ಭಾಗದಲ್ಲಿ ನಿರ್ಮಿಸಿರುವ ಆವೈಜ್ಞಾನಿಕ ಭ್ರಷ್ಟಾಚಾರದಿಂದ ಕೂಡಿದ ಟೋಲ್ ಗೇಟ್ ರದ್ದುಪಡಿಸುವಂತೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಅಕ್ಟೋಬರ್ 9ರಂದು ಶಿಕಾರಿಪುರ ಬಂದ್ ಗೆ ಕರೆ ನೀಡಿದ್ದಾರೆ. ಕಣ್ಣು ಕಿವಿ ಇಲ್ಲದ ಸರ್ಕಾರಕ್ಕೆ ಗಮನಕ್ಕೆ ಬರಲೇಬೇಕು, ಇಷ್ಟೊಂದು ಹೋರಾಟ ನಡಿತಾ ಇದ್ದರು. ಈ ಸರ್ಕಾರ ರಿ ಟೆಂಡರ್ ಹಾಕಿ ಮತ್ತೊಮ್ಮೆ ಅದೇ ಟೆಂಡರ್ ದಾರನಿಗೆ ಅವಕಾಶ ಕೊಟ್ಟಿದ್ದಾರೆ.