ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಶೋಗೆ ತನಗೆ ಆಹ್ವಾನ ನೀಡದಿದ್ದರೆ ಬಾಂಬ್ ಇಡುವುದಾಗಿ ಹುಚ್ಚಾಟವಾಡಿದ್ದವನು ಪೊಲೀಸ್ ಅತಿಥಿಯಾಗಿದ್ದಾನೆ.ಬಿಗ್‌ಬಾಸ್ ಮನೆಯ ಬಳಿ ಹೋಗಿ ಬಾಯಿಗೆ ಬಂದಂತೆ ವೀಡಿಯೋ ಮಾಡಿ Mummy-Ashok16 ಎಂಬ ಇನ್‌ಸ್ಟಾಗ್ರಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕುಂಬಳಗೋಡು ಠಾಣೆ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಬಿಸಿ ಮುಟ್ಟಿಸಿದ್ದಾರೆ. ಪ್ರಕರಣದ ಕುರಿತು ಸೆಪ್ಟೆಂಬರ್ 27ರಂದು ಮಧ್ಯಾಹ್ನ 2 ಗಂಟೆಗೆ ಮಾಹಿತಿ ಹಂಚಿಕೊಂಡಿರುವ ಪೊಲೀಸರು, 'ಆರೋಪಿಯ ವಿರುದ್ಧ ಗಂಭೀರವಲ್ಲದ ಪ್ರಕರಣ ದಾಖಲಿಸಿಕೊಂಡು, ಎಚ್ಚರಿಕೆ ನೀಡಿ ಕಳಿಸಲಾಗಿದೆ' ಎಂದು ತಿಳಿಸಿದರು.