ಸೇಡಂ ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ಬಂಜಾರ, ಭೋವಿ, ಕೊರ್ಮ, ಕೊರ್ಚಾ ಸಮುದಾಯದ ಮುಖಂಡರು, ಯುವಕರು, ರಾಜಕೀಯ ಮುಖಂಡರು, ಸಮಾಜ ಹಿತಚಿಂತಕರು ಹಾಗೂ ಹೋರಾಟಗಾರರು ಒಂದೇ ವೇದಿಕೆಯಲ್ಲಿ ಸೇರಿ ಒಳ ಮೀಸಲಾತಿ ಕುರಿತ ಚರ್ಚೆ ನಡೆಸಿದರು. ಅವರು ಅಸಂವಿಧಾನಿಕವಾಗಿ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿರುವ ಒಳ ಮೀಸಲಾತಿ ಕ್ರಮಗಳನ್ನು ಬಲವಾಗಿ ವಿರೋಧಿಸಿದರು. ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನವನ್ನು ತಡೆಗಟ್ಟಲು ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ನಡೆಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಂಡರು.