ರಾಜ್ಯಾದ್ಯಂತ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ವಿಘ್ನವಿನಾಶಕನನ್ನು ಅಷ್ಟೇ ಗ್ರ್ಯಾಂಡ್ ಆಗಿಯೇ ಬರಮಾಡಿಕೊಳ್ಳಲಾಗಿದೆ. ವಿಶೇಷ ಪರಿಕಲ್ಪನೆಯ ಗಣಪನ ಮೂರ್ತಿಗಳು ಗಮನ ಸೆಳೆಯುತ್ತಿವೆ. ಅದರಂತೆ ಬೆಂಗಳೂರಿನ ಸಿಂಗಸಂದ್ರದಲ್ಲಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೂಗುಯ್ಯಾಲೆ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. 15 ಅಡಿ ಎತ್ತರವಿರುವ ಗಣೇಶ ವಿರಾಜಮಾನ ಭಂಗಿಯಲ್ಲಿ ತೂಗುಯ್ಯಾಲೆ ಮೇಲೆ ಆಸೀನನಾಗಿದ್ದಾನೆ. ಸುತ್ತಲೂ ಕಬ್ಬಿನ ಗೊನೆಗಳನ್ನಿಟ್ಟು ಮಂಟಪವನ್ನು ಸಿಂಗರಿಸಲಾಗಿದೆ.