ಬೇಲೂರು : ಬೇಲೂರಿನಲ್ಲಿ ಗಣೇಶ ವಿಗ್ರಹಕ್ಕೆ ಅವಮಾನ ಮಾಡಿದ ಪ್ರಕರಣದಲ್ಲಿ ವಿಜಯನಗರ (ಹಾಸನ) ನಿವಾಸಿ ಲೀಲಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೇಲೂರು ಪುರಸಭೆ ಆವರಣದಲ್ಲಿರುವ ದೇವಾಲಯದಲ್ಲಿ ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಡುವ ಮೂಲಕ ಅವಮಾನ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಹಾಸನ ಜಿಲ್ಲಾ ಎಸ್ಪಿ ಮೊಹಮದ್ ಸುಜೀತಾ ಮಾಹಿತಿ ನೀಡಿದ್ದು ಹೀಗಿದೆ: ನಿನ್ನೆ ರಾತ್ರಿ 8.30ರ ಸುಮಾರಿಗೆ ಲೀಲಮ್ಮ ಹಾಸನದಿಂದ ಬಸ್‌ನಲ್ಲಿ ಬೇಲೂರಿಗೆ ತೆರಳಿದ್ದರು. ನಂತರ ಚಿಕ್ಕಮಗಳೂರಿಗೆ ಹೋಗಿ, ಅಲ್ಲಿಂದ ಪುನಃ ಬೇಲೂರಿಗೆ ಮರಳಿದ್ದಾರೆ. ಪುರಸಭೆ ಆವರಣದ ದೇವಾಲಯಕ್ಕೆ ಪ್ರವೇಶಿಸಿ ವಿಗ್ರಹದ ಬಳಿ ಅಸಭ್ಯ ಕೃತ್ಯ ಎಸಗಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ಬಳಿಕ ಅವರು ಹಾಸನಕ್ಕೆ ಮರಳಿದ್ದರು.