ಶಿವಮೊಗ್ಗ ನಗರದ ಎಲ್ಲಾ ಜೆಸಿಐ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 9ರಿಂದ 15ರ ವರೆಗೆ ಜೆಸಿಐ ಸಪ್ತಾಹವನ್ನು ಆಚರಿಸಲಾಗುವುದು ಎಂದು ವಲಯ ಅಧ್ಯಕ್ಷ ಸಿ.ಎ. ಗೌರೀಶ್ ಭಾರ್ಗವ ಹೇಳಿದರು. ಸೋಮವಾರ ಸಂಜೆ 6 ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಸಿಐ ಭಾರತ ವಲಯ-24ರ ಜೆಸಿಐ ಸಪ್ತಾಹವನ್ನು ‘ಫ್ರಿಜಂ’ ಎಂಬ ಧ್ಯೇಯವಾಕ್ಯದೊಡನೆ ಆಚರಿಸಲಾಗುತ್ತದೆ. ಈ ಸಪ್ತಾಹದಲ್ಲಿ ನಗರದ ಎಲ್ಲಾ ಘಟಕಗಳು ಕೈಜೋಡಿಸುತ್ತಿದೆ. ಸಪ್ತಾಹದ ಮುಖ್ಯ ಕಾರ್ಯಕ್ರಮಗಳಾದ ಧ್ವಜಾರೋಹಣ, ಒಳಾಂಗಣ ಕ್ರೀಡೆ, ಆರೋಗ್ಯ ತಪಾಸಣೆ, ವಾಕ್ವಾನ್ ಮ್ಯಾರಾಥಾನ್, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.