ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಾಲ್ತ್ಯಾ ತಾಂಡಾದಲ್ಲಿ ಹುಚ್ಚು ನಾಯಿಯ ಕಡಿತಕ್ಕೆ ಒಳಗಾದ ಹಸು ಕೂಡಾ ಹುಚ್ಚಾಗಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ನಿವಾಸಿ ಪ್ರೇಮಸಿಂಗ್ ರಾಠೋಡ ಎಂಬುವರಿಗೆ ಸೇರಿದ ಹಸು ಇದಾಗಿದೆ. ಹುಚ್ಚು ನಾಯಿ ಕಡಿದು ಹಸು ಕೂಡಾ ನಿಯಂತ್ರಣ ಕಳೆದುಕೊಂಡಿದೆ. ತಾಂಡಾದಲ್ಲಿ ಸಂಚರಿಸಿ ಗೋಡೆಗೆ ತಲೆ ಗುದ್ದಿಕೊಂಡು ಗಂಭೀರ ಗಾಯಗೊಂಡಿದೆ. ಇದರಿಂದಾಗಿ ಹಸುವಿನ ಕೊಂಬು ಮುರಿದು ರಕ್ತಸ್ತ್ರಾವ ಉಂಟಾಗಿದೆ. ರಕ್ತಸ್ತ್ರಾವದಿಂದ ನರಳುತ್ತಿದ್ದ ಹಸುವಿನ ಹಿಂದೆ ಹಲವು ನಾಯಿಗಳು ಓಡಾಡಿ ರಕ್ತ ನೆಕ್ಕುತ್ತಿರುವುದರಿಂದ ರೋಗ ವ್ಯಾಪಕವಾಗಿ ಹರಡುವ ಭೀತಿ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.