ತಾಲ್ಲೂಕಿನ ಬೀರಂಬಳ್ಳಿ ಗ್ರಾಮದಲ್ಲಿ ಸತ್ತವರೊಬ್ಬರ ಅಂತ್ಯ ಸಂಸ್ಕಾರಕ್ಕಾಗಿ ಪರದಾಡಿದ ಘಟನೆ ನಡೆದಿದೆ. ಎನ್. ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಂಬಳ್ಳಿ ಗ್ರಾಮದಲ್ಲಿ ಸುಮಾರು 1200 ಕ್ಕೂ ಜನ ವಾಸಿಸುತ್ತಿದ್ದರ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಇಲ್ಲದೆ ಅಂತ್ಯಕ್ರಿಯೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2022 ರಲ್ಲಿ ಹೆಚ್.ಡಿ ಕೋಟೆ ಕಂದಾಯ ಇಲಾಖೆ ಬೀರಂಬಳ್ಳಿ ಗ್ರಾಮದ ಸರ್ವೆ ನಂಬರ್ 50 ರಲ್ಲಿ ಒಂದು ಎಕರೆ ಜಾಗವನ್ನು ಸ್ಮಶಾನಕ್ಕೆ ನೀಡಲಾಗಿದೆ. ಆದರೆ, ಸ್ಮಶಾನದ ಸ್ಥಳ ಯಾವುದೆಂದು ಗುರುತಿಸಲಾಗಿಲ್ಲ. ಕಬಿನಿ ಜಲಾಶಯ ಭರ್ತಿಯಾದರೆ ಶವ ಸಂಸ್ಕಾರಕ್ಕೆ ಹರ ಸಾಹಸ ಪಡಬೇಕಾಗಿದೆ.