ಪಾವಗಡ ತಾಲೂಕಿನ ಗುಂಡಾರ್ಲಹಳ್ಳಿ ಗ್ರಾಮದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ರಾತ್ರಿಯ ವೇಳೆ ಮನೆಗೆ ನುಗ್ಗಿದ ಕಳ್ಳರು ಚಂದನ ಎಂಬ ಮಹಿಳೆಯ ಕೊರಳಲ್ಲಿದ್ದ ತಾಳಿಬಟ್ಟು, ಕಿವಿಗುಂಡು ಹಾಗೂ ಎರಡು ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ. ವಿಶೇಷವೆಂದರೆ ಇದೇ ಮನೆಯಲ್ಲಿ ಮೂರು ತಿಂಗಳ ಹಿಂದೆ ಕೂಡ ಬಂಗಾರದ ಓಡೆವೆ ಕಳ್ಳತನವಾಗಿತ್ತು. ಸ್ಥಳೀಯ ಮುಖಂಡ ಬಲರಾಮ್ ರೆಡ್ಡಿ, “ಅದೇ ಮನೆಯಲ್ಲಿ ಎರಡನೇ ಬಾರಿ ಕಳ್ಳತನವಾಗುವುದು ಪೊಲೀಸರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಎಸ್ಪಿ ಮಟ್ಟದಲ್ಲಿ ವಿಶೇಷ ಕ್ರಮ ಅಗತ್ಯ” ಎಂದು ಕಳವಳ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಶನಿವಾರ ಮಧ್ಯಾಹ್ನ 2 ಗಂಟೆಯಲ್ಲಿ ಎಎಸ್ಪಿ ಪುರು