Download Now Banner

This browser does not support the video element.

ಸಾಗರ: ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯದಿಂದ 36 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Sagar, Shimoga | Aug 27, 2025
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಲ್ಲಿ ನಿರಂತರ ಮಳೆಯ ಪರಿಣಾಮವಾಗಿ ಮತ್ತೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ 11 ಗೇಟ್‌ಗಳ ಮೂಲಕ 36000 ಕ್ಯೂಸೆಕ್ ನೀರನ್ನ ಬುಧವಾರ ಸಂಜೆ 5 ಗಂಟೆಗೆ ಬಿಡುಗಡೆ ಮಾಡಲಾಗಿದೆ.ಈ ನೀರಿನ ಹರಿವು ಜೋಗ ಜಲಪಾತದಲ್ಲಿ ಅದ್ಭುತ ದೃಶ್ಯವನ್ನು ಮೂಡಿಸಿದ್ದು, ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಭೇಟಿ ನೀಡಲು ಆರಂಭಿಸಿದ್ದಾರೆ. ಮಳೆಗಾಲದಲ್ಲಿ ಜೋಗದಲ್ಲಿ ಜಲಧಾರೆ ಹೆಚ್ಚಾಗುವುದು ಸಾಮಾನ್ಯವಾದರೂ, ಗೇಟ್‌ಗಳನ್ನು ಏಕಕಾಲದಲ್ಲಿ ತೆರೆಯುವುದರಿಂದ ಕಣ್ತುಂಬಿಸುವಂತಿದೆ.
Read More News
T & CPrivacy PolicyContact Us