ಉಜನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ ಪರಿಣಾಮ ಮಣ್ಣೂರು ಎಲ್ಲಮ್ಮ ದೇವಿ ದೇವಸ್ಥಾನದ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ದೇವಸ್ಥಾನ ಕೂಡಾ ಅರ್ಧಭಾಗದಷ್ಟು ಮುಳುಗಡೆ ಆಗಿದೆ. ಈ ಹಿನ್ನಲೆ ತಾಯಿಯ ಪಾದುವಿಕೆಗಳನ್ನು ಮುಖ್ಯದ್ವಾರದ ಬಳಿ ಇಡಲಾಗಿದ್ದು, ಇಲ್ಲಿಂದಲೇ ದರ್ಶನ ಮಾಡಬಹುದಾಗಿದೆ. ಅಮವಾಸೆಯಾದ ಹಿನ್ನಲೆ ನಾಳೆ ಸುಮಾರು 40 ಸಾವಿರ ಜನಸಂಖ್ಯೆ ಬರುವ ಸಾಧ್ಯತೆ ಇದ್ದು, ಭಕ್ತರು ಗ್ರಾಮದಲ್ಲಿರುವ ಮತ್ತೊಂದು ಯಲ್ಲಮ್ಮತಾಯಿಯ ದರ್ಶನ ಪಡೆಯಬೇಕೆಂದು ಅರ್ಚಕ ಸಚಿನ ಹೇಳಿದ್ದಾರೆ.