*ಚಿಕ್ಕಮಗಳೂರು: ಸಿ.ಟಿ ರವಿ ಸಿಎಂ - ಯೋಗಿ ಪಿಎಂ ಆಗಲಿ ಸೌಜನ್ಯಳಿಗೆ ನ್ಯಾಯ ಸಿಗಲಿ ಎಂದು ಗಣೇಶನಿಗೆ ಪತ್ರ* ಚಿಕ್ಕಮಗಳೂರು: ಹಿಂದೂ ಮಹಾಸಭಾ ಗಣಪತಿ ಹುಂಡಿಯಲ್ಲಿ ಭಕ್ತರ ವಿಭಿನ್ನ ಬೇಡಿಕೆಗಳು ಪತ್ತೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ ಪ್ರತಿಷ್ಠಾಪನೆಯಾಗಿದ್ದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮಹೋತ್ಸವವು ಕಳೆದ ಶನಿವಾರ ಅದ್ದೂರಿಯಾಗಿ ನೆರವೇರಿತ್ತು. ಇದೀಗ ಗಣಪತಿ ಹುಂಡಿಯ ಎಣಿಕೆ ಕಾರ್ಯದ ವೇಳೆ, ಹಣದ ಜೊತೆಗೆ ಭಕ್ತರು ಬರೆದಿದ್ದ ವಿಭಿನ್ನ ಪತ್ರಗಳು ಪತ್ತೆಯಾಗಿವೆ. ಸುಮಾರು ರೂ. 60,000 ಹಣ ಸಂಗ್ರಹವಾಗಿದ್ದು, ನಾಲ್ಕು ಪ್ರಮುಖ ಪತ್ರಗಳು ಜನರ ಗಮನ ಸೆಳೆದಿವೆ. ಪತ್ತೆಯಾದ ಪತ್ರಗಳಲ್ಲಿ ಕೆಲವು ರಾಜಕೀಯ ಮತ್ತು ಸಾಮಾ