ವಿದ್ಯುತ್ ಅವಘಡದಿಂದ ಹಸುವೊಂದು ಸಾವನ್ನಪ್ಪಿದ ಘಟನೆ ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದ ವೃಂದಾ ಬಡಾವಣೆಯಲ್ಲಿ ನಡೆದಿದೆ.ವೃಂದಾ ಬಡಾವಣೆಯ ನಿವಾಸಿಗಳಾದ ಸುಮಿತ್ರಾ ಸುದಿಕುಮಾರ್ ಅವರ ಹಸು ಸಾವನ್ನಪ್ಪಿದೆ. ವೃಂದಾ ಬಡಾವಣೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಟಿ.ಸಿಯಿಂದ ವಿದ್ಯುತ್ ಪ್ರವಹಿಸಿ ಹಸು ಸಾವಿಗೀಡಾಗಿದೆ. ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಿಸಿದ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.