Download Now Banner

This browser does not support the video element.

ಕಲಬುರಗಿ: ನಗರದಲ್ಲಿ ರಾತ್ರಿ ಅಟೋದಲ್ಲಿ ಪ್ರಯಾಣಿಕರ ಸುಲಿಗೆ, 3 ದಿನಗಳಲ್ಲಿ ಇಬ್ಬರನ್ನು ದೋಚಿದ ಖದೀಮರು

Kalaburagi, Kalaburagi | Aug 30, 2025
ಮೂರು ದಿನಗಳ ಅಂತರದಲ್ಲಿ ಇಬ್ಬರು ಅಟೋ ಪ್ರಯಾಣಿಕರನ್ನು ಸುಲಿಗೆ ಮಾಡಿರುವ ಬಗ್ಗೆ ಅಶೋಕ ನಗರ ಠಾಣಾ ಹಾಗೂ ಬ್ರಹ್ಮಪೂರ ಠಾಣಾದಲ್ಲಿ ಪ್ರಕರಣ ದಾಖಲು.. ಹೈದ್ರಾಬಾದ್ ಮೂಲದ ಪರಶುರಾಮಎಂಬುವರು ರಾತ್ರಿ 10.30 ಕ್ಕೆ ಕರುಣೇಶ್ವರ ಕಾಲೋನಿಯಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳುವಾಗ ಆರೋಪಿಗಳು ಚಾಕುವಿನಿಂದ ರಕ್ತಗಾಯ ಮಾಡಿ, ₹1 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹3,000 ನಗದು ಸುಲಿಗೆ.. ಆಗಸ್ಟ್ 24ರಂದು ಬ್ಯಾಂಕ್ ಮ್ಯಾನೇಜರ್ ಮಲ್ಲಿಕಾರ್ಜುನ ಕಡೂನ್ ಬಾಗಲಕೋಟೆಯಿಂದ ಕಲಬುರಗಿಗೆ ಆಗಮಿಸಿ ಮಧ್ಯರಾತ್ರಿ 2 ಗಂಟೆಗೆ ತಿಮ್ಮಾಪುರ ಸರ್ಕಲ್‌ನಿಂದ ಜಗತ್ ಕ್ರಾಸ್ ಕಡೆ ತೆರಳುವಾಗ ನಾಲ್ವರೂ ಸೇರಿ ಹಲ್ಲೆ ಮಾಡಿ, ₹80 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ₹2,500 ನಗದು ದೋಚಿ, ಗಲ್ಸ್ ಕಾಲೇಜು ಬಳಿ ಅಟೋದಿಂದ ತಳ್ಳಿ ಪರಾರಿ..
Read More News
T & CPrivacy PolicyContact Us