ಇಳಕಲ್ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆ ಅಗಸ್ಟ ೨೯ ಸಾಯಂಕಾಲ ೪ ಗಂಟೆಗೆ ಸಂದರ್ಭ ತಾಲೂಕ ಪಂಚಾಯತಿ ಆವರಣದಲ್ಲಿರುವ ತಾಲೂಕ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕಚೇರಿಯಲ್ಲಿ ತಾಲೂಕ ಅಧ್ಯಕ್ಷ ಮಹಾಂತೇಶ್ ಹನುಮನಾಳ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಶಕ್ತಿ ಯೋಜನೆಯಲ್ಲಿ ೬,೧೬,೬೨೧ ಮಹಿಳಾ ಫಲಾನುಭವಿಗಳು ಆಗಸ್ಟ್ ಮಾಸಾಂತ್ಯದ ವರೆಗೆ ಪ್ರಯಾಣಿಸಿದ್ದಾರೆ ಇದರಿಂದಾಗಿ ಎರಡು ಕೋಟಿ ೬೦ ಲಕ್ಷದ ೫೩೪೮ ರೂಪಾಯಿ ಆದಾಯವಾಗಿದೆ ಎಂದು ಹೇಳಿದರು.