ನವಲಗುಂದದ 110 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ 2ನೇ ತ್ರೈಮಾಸಿಕ ಕಾಮಗಾರಿ ನಿಮಿತ್ತ ಸೆ 12 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 4ರವರೆಗೆ 11 ಕೆವಿ ಮಾರ್ಗಗಳಾದ ನವಲಗುಂದ, ಅಳಗವಾಡಿ, ಯಮನೂರು, ಶ್ಯಾನವಾಡ, ಕುಮಾರಕೊಪ್ಪ, ಇಬ್ರಾಹ್ಮಪುರ, ಕಡದಳ್ಳಿ,ಅಮರಗೋಳ, ಸೋತಕ್ನಳ್ಳಿ, ಶಲವಡಿ, ಬಳ್ಳೂರು ಹಾಗೂ ಚೆನ್ನಮ್ಮ( ವಾಟರ್ ಸಪ್ಲೈ) ಮಾರ್ಗಗಳ ಮೇಲೆ ಬರುವ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.