ಹಾಸನ : ದಿವಂಗತ ನಟ ಡಾ. ವಿಷ್ಣುವರ್ಧನ್ ಅವರಿಗೆ ಸರ್ಕಾರ ಕರ್ನಾಟಕ ರತ್ನ ಘೋಷಿಸಿದ ಹಿನ್ನೆಲೆಯಲ್ಲಿ ವಿಷ್ಣು ಸೇನಾ ವತಿಯಿಂದ ನಗರದ ಸಾಲಗಾಮೆ ರಸ್ತೆ ಬಳಿ ವಿಷ್ಣು ವರ್ಧನ್ ಅವರ ಪುತ್ಥಳಿ ನಿರ್ಮಿಸಿ ಅಬ್ರಾಮಚರಣೆ ಮಾಡಿದರು.ವಿಷ್ಣು ಸೇನಾ ಸಮಿತಿಯ ಸದಸ್ಯರು ಪಟಾಕಿ ಸಿಡಿಸಿ ಸಂಭ್ರಮಿಸಿ ಬಳಿಕ ಡಾ.ವಿಷ್ಣು ವರ್ಧನ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ವಿಷ್ಣು ವರ್ಧನ್ ಪರ ಘೋಷಣೆ ಕೂಗಿ ಸಂತಸ ವ್ಯಕ್ತ ಪಡಿಸಿದರು.ಈ ವೇಳೆ ವಿಷ್ಣು ಸೇನೆಯ ಸದಸ್ಯ ಮಹಾಂತಪ್ಪ ಮಾತನಾಡಿ, ಡಾ.ವಿಷ್ಣು ವರ್ಧನ್ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡಿಸುವುದು ಶ್ಲಾಘನೀಯ. ಅವರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಿದ ಸರ್ಕಾರ ಹಾಗೂ ಆಯ್ಕೆ ಸಮಿತಿಯ ಎಲ್ಲಾ ಸದಸ್ಯರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು