ಜಾತಿ ನಿಂದನೆ ಆರೋಪದಡಿ ಬಂಧನವಾಗಿದ್ದ ಲಾಯರ್ ಜಗದೀಶ್ ಅವರಿಗೆ ಜಾಮೀನು ಮಂಜೂರಾಗಿದೆ. ಶನಿವಾರ ವಕೀಲ ಜಗದೀಶ್ಗೆ 7ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 8,000 ರೂಪಾಯಿ ಶ್ಯೂರಿಟಿ ಬಾಂಡ್ ನೀಡಲು ಕೋರ್ಟ್ ಸೂಚಿಸಿದೆ. ಶುಕ್ರವಾರ ಕೊಡಿಗೆಹಳ್ಳಿ ಪೊಲೀಸರಿಂದ ಬಂಧನವಾಗಿದ್ದ ಜಗದೀಶ್ ಇದೀಗ ಹೊರಬಂದಿದ್ದಾರೆ. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಅನ್ವಯ ಲಾಯರ್ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.