ತೀರ್ಥಹಳ್ಳಿ ತಾಲೂಕಿನ ಆಗುಂಬೆ ಗ್ರಾಮ ಪಂಚಾಯತಿ ಹಾಗೂ ಬಿದರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗಸರಕೋಣೆ, ಕಾರೆಕುಂಬ್ರಿ, ಜಡ್ಡು, ಮಳಲಿ, ಆಗುಂಬೆ, ಉಳುಮಡಿ ಭಾಗದಲ್ಲಿ ಹಾಗೂ ತಲ್ಲೂರು, ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಸಂಚರಿಸುತ್ತಿದ್ದು, ಈ ಪ್ರದೇಶಗಳ ಸುತ್ತಮುತ್ತಲಿನ ಗ್ರಾಮಸ್ಥರು ಜಾಗರುಕರಾಗಿ ಇರಬೇಕೆಂದು ಅರಣ್ಯ ಇಲಾಖೆ ಸೋಮವಾರ ಸಂಜೆ 6 ಗಂಟೆಗೆ ತಿಳಿಸಿದೆ. ರಸ್ತೆಯಲ್ಲಿ ಸಂಚರಿಸುವವರು, ಶಾಲಾ ಮಕ್ಕಳು, ವೃದ್ಧರು ಹೆಚ್ಚಿನ ಜಾಗರೂಕತೆಯಿಂದ ಸಂಚರಿಸಬೇಕು ಹಾಗೂ ಹಾಗೂ ಸಂಜೆ ಆರು ಗಂಟೆಯಿಂದ ಮೇಲ್ಕಂಡ ಗ್ರಾಮಗಳಲ್ಲಿ ವಾಹನಗಳಲ್ಲಿ ಹಾಗೂ ಕಾಲ್ನಡಿಗೆಯಲ್ಲಿ ಅನಗತ್ಯವಾಗಿ