ಯಲ್ಲಾಪುರ: ಪ್ರಕೃತಿ-ಸಂಸ್ಕೃತಿ ಸಮ್ಮಿಲನದ ಅರಣ್ಯಇಲಾಖೆಯ ಪರಿಸರ ಸ್ನೇಹಿ ಗಣಪ ಗಮನ ಸೆಳೆಯುವಂತಿತ್ತು. ಯಲ್ಲಾಪುರ : ಪಟ್ಟಣದ ಅರಣ್ಯ ಇಲಾಖೆ ವಿಭಾಗೀಯ ಕಚೇರಿ ಆವರಣ ದಲ್ಲಿ ಅರಣ್ಯದ ಮರುಸೃಷ್ಟಿಯಲ್ಲಿ ಮೂಡಿ ಬಂದ ಪರಿಕಲ್ಪನೆಯಲ್ಲಿ ಕೃತಕ ಬಣ್ಣ ಬಳಸದೆ ಮಣ್ಣಿನಿಂದಲೇ ತಯಾರಿಸಿರುವ ಪರಿಸರ ಸ್ನೇಹಿ ಗಣೇಶ್ ಪ್ರತಿಷ್ಠಾಪನೆ ಮಾಡಿ ಮಾದರಿಯಾಗಿದ್ದಾರೆ. ಅಲ್ಲಿನ ಸಿಬ್ಬಂದಿಗಳು ಬೇರೆ ಬೇರೆ ಮತ ಧರ್ಮದವರು ಇದ್ದರೂ ಕೂಡ ಒಂದೇ ಬಣ್ಣದ ಸಂಪ್ರದಾಯಿಕ ಧಿರಿಸು ಧರಿಸಿ ಗಣೇಶ್ ಮೂರ್ತಿಯನ್ನು ಮೆರವಣಿಗೆ ಯಲ್ಲಿ ಕರೆತಂದು ಅರಣ್ಯಪರಿಕಲ್ಪನೆಯ ಮಂಟಪ ದಲ್ಲಿ ಪ್ರತಿಷ್ಠಾಪನೆ ಮಾಡಿ ಸಂಭ್ರಮದ ಗಣೇಶೋತ್ಸವಕ್ಕೆ ನಾಂದಿ ಹಾಡಿದ್ದಾರೆ.