ಬೆಂಗಳೂರಿನ ಬ್ಯಾಟರಾಯನಪುರ ವ್ಯಾಪ್ತಿಗೆ ಬರುವ ಮಾಲ್ ಆಫ್ ಏಷ್ಯಾ ಮಾಲ್‌ನಲ್ಲಿ ಶನಿವಾರ ತೆಲುಗು ನಟ ತೇಜ್ ಸಜ್ಜಾ ತಮ್ಮ ಮಿರಾಯ್ ಸಿನಿಮಾದ ಪ್ರಚಾರಕ್ಕೆ ಆಗಮಿಸಿದ್ದರು. ಸಂಜೆ ೭ ಗಂಟೆ ಸುಮಾರಿಗೆ ನಡೆದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಟ ತೇಜ್ ಸಜ್ಜ ಮಾತನಾಡುತ್ತಿರುವಾಗ, ವಿಶೇಷ ಚೇತನ ಯುವಕನೋರ್ವ ಆಗಮಿಸಿ, ಎಲ್ಲರನ್ನ ಅಚ್ಚರಿಗೆ ದೂಡಿದರು ಇದೇ ವೇಳೆ ಈ ಹಿಂದಿನ ಹನುಮಾನ್ ಸಿನಿಮಾದಲ್ಲಿ ತೇಜ್ ಅವರ ನಟನೆ ಹೇಗಿತ್ತು ಎಂಬುದನ್ನು ಹಾವಭಾವದ ಮೂಲಕ ತೋರಿಸಿ, ತೇಜ್ ಅವರನ್ನು ಇಂಪ್ರೆಸ್ ಮಾಡಿದರು.