ಯಲ್ಲಾಪುರ : ಕಿರವತ್ತಿಯ ಡೊಮಗೇರಿಯಲ್ಲಿ ಅಂಗನವಾಡಿ ಮುಗಿಸಿ ಮನೆಗೆ ತೆರಳುತ್ತಿದ್ದ ಮಕ್ಕಳ ಮೇಲೆ ಬೃಹತ್ ಅತ್ತಿ ಮರವೊಂದು ಉರುಳಿ ಬಿದ್ದ ಪರಿಣಾಮ ಗರ್ಭಿಣಿ ಮಹಿಳೆಯರ್ವಳು ದಾರುಣ ಸಾವು ಕಂಡಿದ್ದು, ಕೆಲ ಮಕ್ಕಳು ತೀವೃವಾಗಿ ಗಾಯಗೊಂಡಿದ್ದಾರೆ.ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಮಕ್ಕಳನ್ನು ಮನೆಗೆ ಕರೆತರಲು ತೆರಳಿದ್ದ 5 ತಿಂಗಳ ಗರ್ಭಿಣಿ ಸಾವಿತ್ರಿ ಬಾಬು ಖರಾತ್(28) ಘಟನೆಯಲ್ಲಿ ಸಾವನ್ನೊಪ್ಪಿದ್ದಾರೆ. ಗಾಯಾಳುಗಳಾದ ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ತೀವೃವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕೆತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ.ಸ್ಥಳಕ್ಕೆ ಧಾವಿಸಿದ ಪೊಲೀಸರು ಹೆಸ್ಕಾಂ ಸಿಬ್ಬಂದಿಗಳು ರಕ್ಷಣ ಕಾರ್ಯದಲ್ಲಿತೊಡಗಿದ್ದರು.