ಹು-ಧಾ ಅವಳಿನಗರದಲ್ಲಿ ಗಣೇಶ್ ಹಬ್ಬ ಹಾಗೂ ಈದ್ಗಾ ಮಿಲಾದ್ ಹಬ್ಬದ ಸಂದರ್ಭದಲ್ಲಿ ರಾತ್ರಿ 10 ಗಂಟೆ ಮೇಲೆ ಡಿಜೆ ಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 10 ಗಂಟೆ ನಂತರ ಡಿಜೆ ಅವಕಾಶ ನೀಡುವುದಿಲ್ಲ ಎಂದರು. ಇನ್ನು ಗಣೇಶ ಈದ್ಗಾ ಮಿಲಾದ್ ಹಬ್ಬದ ಹಿನ್ನೆಲೆ ತಯಾರಿ ಮಾಡಿಕೊಳ್ತಾ ಇದ್ದೇವೆ ಹಬ್ಬದ ಪ್ರಯುಕ್ತ ಸಭೆ ಕೂಡ ಮಾಡಲಾಗಿದೆ . ಪಾಲಿಕೆಯಿಂದ ಗಣೇಶ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ ಯಾವುದೇ ಅವಘಡಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.