ವಿರಾಜಪೇಟೆ:ಬೆಂಗಳೂರು ಮೈಸೂರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ನಡೆದಿದೆ.ಕೈಲ್ ಮೂಹೂರ್ತ, ಈದ್ ಮಿಲಾದ್, ಓಣಂ ಹಬ್ಬಕ್ಕೆ ಕೊಡಗಿಗೆ ಆಗಮ ಆಗಮಿಸದವರು ಇಂದು ರಜೆ ಮುಗಿಸಿ ಮರಳಿ ಮೈಸೂರು ಹಾಗೂ ಬೆಂಗಳೂರು, ಕೇರಳ ಕಡೆ ಹೊರಟ್ಟಿದ್ದು ಗಂಟೆ ಗಟ್ಟಲೆ ಕಾದರು ಕೂಡ ಬಸ್ ಬಾರದೆ ಪರದಾಡಿದ್ದಾರೆ. ಆಗೊಂದು ಈಗೊಂದು ಬಸ್ ಬಂದರು ಕೂಡ ಫುಲ್ ರಶ್ ಆಗುತ್ತಿದ್ದು ಸಾರ್ವಜನಿಕರು ಪರದಾಟುತ್ತಿದ್ದಾರೆ.ಸಂಭಂದಪಟ್ಟ ಇಲಾಖೆ ಅಧಿಕಾರಿಗಳು ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.