ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಖಾಸಗಿ ಶಾಲೆ ವಾಹನಗಳ ಮೇಲೆ ಹೆಚ್ಚಿನದಾಗಿ ಕನ್ನಡ ಪದಗಳು ಬಳಕೆ ಮಾಡಬೇಕು ಎಂದು ಕರಾವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಮನವಿ ಸಲ್ಲಿಸಿದರು. ಖಾಸಗಿ ಶಾಲೆಗಳ ವಾಹನಗಳ ಮೇಲೆ ಶೇ.60 ರಷ್ಟು ಕನ್ನಡ ಪದಗಳು ಬಳಕೆ ಮಾಡುತ್ತಿಲ್ಲ, ಕರ್ನಾಟಕದಲ್ಲಿ ಇದ್ದು ಕನ್ನಡ ಪದಗಳು ಬಳಕೆ ಮಾಡದಿರುವುದು ಕನ್ನಡಕ್ಕೆ ದ್ರೋಹ ಮಾಡಿದಂತೆ, ಎಲ್ಲಾ ಖಾಸಗಿ ಶಾಲೆಗಳ ವಾಹನಗಳ ಮೇಲೆ ಕನ್ನಡ ಅಕ್ಷರಗಳು ಬರೆಸುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯ ಮಾಡಿದರು.