ಪಟ್ಟಣದ ಜಾಲಿ ಕ್ರಾಸ್ ಬಳಿ ಹಣ್ಣು ತರಕಾರಿ ಹೋಲ್ ಸೇಲ್ ಮಳಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಲಕ್ಷಾಂತರ ಹಾನಿಯಾದ ಘಟನೆ ನಡೆದಿದೆ. ನಗರದ ಜಾಲಿ ಕ್ರಾಸ್‌ನ ತಾಸಿನ್ ಹಣ್ಣು ಹಾಗೂ ತರಕಾರಿ ಹೋಲ್ ಸೇಲ್, ರಿಟೇಲ್ ಶಾಪ್ ಇದಾಗಿದ್ದು ಅ 25 ರಂದು ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿಯ ಕೆನ್ನಾಲಿಗೆಗೆ ಹಣ್ಣು,ತರಕಾರಿಗಳು ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದಾಗಿ ಲಕ್ಷಾಂತರ ರೂ ಹಾನಿಯಾಗಿದ್ದು ಸ್ಥಳಕ್ಕಾಗಮಿಸಿದ ಭಟ್ಕಳ, ಹೊನ್ನಾವರ, ಬೈಂದೂರು ಘಟಕದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸ್ಥಳಕ್ಕೆ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ,ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.