ಕಲಬುರಗಿಯ ಲೋಹರಗಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಮಹೋತ್ಸವ ಅಂತ್ಯಂತ ಭಕ್ತಿ, ಭಾವ ಹಾಗೂ ಸಾಂಪ್ರದಾಯಿಕ ವೈಭವದಿಂದ ಕೂಡಿದ ರೀತಿಯಲ್ಲಿ ನೇರವೇರಿತು. ಶ್ರೀ ಮಲ್ಲಿಕಾರ್ಜುನ ಪಂಚ ಕಮಿಟಿಯ ಆಶ್ರಯದಲ್ಲಿ ಎರಡು ದಿನಗಳ ವಿಶೇಷ ಕಾರ್ಯಕ್ರಮಗಳು ಜರುಗಿದವು. ಆಗಸ್ಟ್ 31 ರಂದು ಖಾಂಡ (ಅನ್ನ ಪ್ರಸಾದ) ಹಾಗೂ ಇಂದು ಸೆಪ್ಟೆಂಬರ್ 1, ಸೋಮವಾರದಂದು ಅದ್ದೂರಿ ಪಲ್ಲಕ್ಕಿ ಮಹೋತ್ಸವ ಜರುಗಿತು. ಕಿರಾಣಾ ಮಾರ್ಕೆಟ್,ಹುಮನಾಬಾದ್ ಬೇಸ್‌ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಮೆರವಣಿಗೆ ಸಾಗಿದ್ದು, ಪುರವಂತಿಕೆ, ಡೋಲು ಬಾಜಾ, ಭಜಂತ್ರಿ ಹಾಗೂ ಬೃಹತ್ ಗೊಂಬೆಗಳ ಕುಣಿತ ಮೆರವಣಿಗೆಯ ಕಳೆ ಇನ್ನಷ್ಟು ಹೆಚ್ಚಿಸಿತು. ಭಕ್ತರ ನಾದ, ಭಜನೆ, ಮಹಿಳೆಯರ ಆರತಿ ಸೇವೆ ಭಕ್ತಿಭಾವದಿಂದ ತೇಲುವಂತೆ ಮಾಡಿತ್ತು.