Download Now Banner

This browser does not support the video element.

ಚಳ್ಳಕೆರೆ: ತಾಲ್ಲೂಕಿನ ವಿವಿಧ ಕಡೆ ಸೆ.12 ರಂದು ವಿದ್ಯುತ್ ವ್ಯತ್ಯಯ; ಬೆಸ್ಕಾಂ ಇಲಾಖೆ ಪ್ರಕಟಣೆ

Challakere, Chitradurga | Sep 11, 2025
ತಾಲ್ಲೂಕಿನ ವಿವಿಧ ಕಡೆ ಸೆ.12 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಗುರುವಾರ ಬೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ತ್ರೈಮಾಸಿಕ ಕಾಮಗಾರಿ ಇರುವುದರಿಂದ ಶುಕ್ರವಾರ ಬೆ.10 ಗಂಟೆಯಿಂದ 5 ಗಂಟೆವರೆಗೆ ನಗರ ವ್ಯಾಪ್ತಿ ಪ್ರದೇಶಗಳು,ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ ಹಾಗು ಬುಡ್ನಹಟ್ಟಿ, ನಗರಂಗೆರೆ, ನನ್ನಿವಾಳ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Read More News
T & CPrivacy PolicyContact Us