ಆನ್ಲೈನ್ ಗೇಮ್ ಎಂಬ ಪೆಡಂಭೂತ ಹಳ್ಳಿಹಳ್ಳಿಗಳಲ್ಲಿಯೂ ಸಹ ವ್ಯಾಪಕವಾಗಿ ಹರಡುತ್ತಿದ್ದು, ಅನೇಕ ಯುವಕರು ಹಣ ಕಳೆದುಕೊಳ್ಳುವಷ್ಟೇ ಅಲ್ಲದೆ ಸಾಲ ಮಾಡಿಕೊಳ್ಳುವ, ಜಮೀನು-ಮನೆ ಮಾರುವ ಸ್ಥಿತಿಗೆ ತಲುಪಿದ್ದಾರೆ. ಇಂತಹ ದುಸ್ಥಿತಿಯನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ರಂಗನಾಥ ಮನವಿ ಮಾಡಿದ್ದಾರೆ. ತಮ್ಮ ಕಚೇರಿಯಲ್ಲಿ ಗುರುವಾರ ಸಂಜೆ 6 ಗಂಟೆಯಲ್ಲಿ ಮಾತನಾಡಿದ ಅವರು, "ಯುವಕರು ಇಂತಹ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದಂತೆ ಜಾಗ್ರತೆ ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಗೂ ತಲುಪಬಹುದು" ಎಂದು ಎಚ್ಚರಿಸಿದರು.