ಖಾಸಗಿ ಬಸ್ ಹಾಗೂ ಎತ್ತಿನ ಗಾಡಿ ನಡುವೆ ಡಿಕ್ಕಿ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟು ಇಬ್ಬರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಗರಂಗೆರೆ ಕ್ರಾಸ್ ಬಳಿ ನಡೆದಿದ್ದು, ಬಸ್ ಪ್ರಯಾಣಿಕರು ಪಾರಾಗಿದ್ದಾರೆ ನಗರದಿಂದ ಖಾಸಗಿ ಬಸ್ ಹಿರಿಯೂರು ಕಡೆ ಹೋಗುವಾಗ ಗಂಧರ್ವ ಬಾರ್ ಬಳಿ ನಗರಂಗೆರೆ ಕ್ರಾಸ್ ಬಳಿ ಬಸ್ ಚಾಲಕನಿಗೆ ಏಕಾಏಕಿ ಮೂರ್ಚೆ ರೋಗ ಬಂದ ಕಾರಣ ಮುಂದೆ ಚಲಿಸುತ್ತಿದ್ದ ಎತ್ತಿನ ಗಾಡಿಗೆ ಗುದ್ದಿ, ಬೈಕ್ ಹಾಗೂ ಇತರೆ ವಾಹನಗಳಿಗೆ ಗುದ್ದಿ ರಸ್ತೆ ಬದಿಗೆ ಬಸ್ ಇಳಿದಿದ್ದು ಬಸ್ ಚಾಲಕನಿಗೆ ಹಾಗೂ ಎತ್ತಿನ ಗಾಡಿಯ ವ್ಯಕ್ತಿ, ಎತ್ತಿಗೆ ಗಾಯಗೊಂಡರೆ, ಮತ್ತೊಂದು ಎತ್ತು ಸ್ಥಳದಲ್ಲೇ ಮೃತಪಟ್ಟಿದ್ದು ಸ್ಥಳಕ್ಕೆ ಪಶು ಸಂಗೋಪನೆ ಸಹಾಯಕ ನಿರ್ದೇಶ ಡಾ.ಶ್ರೀನಿವಾಸ್ ಬಾಬು ಭೇಟಿ ನೀಡಿ ಗಾಯಗೊಂಡ ಎತ್ತಿಗೆ ಚಿಕಿತ್ಸೆ ನೀಡಿದ್ದಾರೆ.