ಮಧುಗಿರಿ ಹಾಗೂ ಕೊರಟಗೆರೆ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಹಾಗೂ ಪೊಲೀಸರ ಕಾರ್ಯಾಚರಣೆಯಲ್ಲಿ ಜಪ್ತಾದ ಮದ್ಯ-ಸೆಂದಿ ವಿಲೇವಾರಿ ಮಾಡಲಾಗಿದೆ. ಮಧುಗಿರಿ ವಲಯದಲ್ಲಿ 14 ಪ್ರಕರಣಗಳಲ್ಲಿ ಜಪ್ತವಾದ 1,110 ಲೀಟರ್ ಸೆಂದಿ, 36 ಲೀಟರ್ ಐಎಂಎಲ್, 32 ಲೀಟರ್ ಬಿಯರ್ ಹಾಗೂ ಕೊರಟಗೆರೆ ವಲಯದಲ್ಲಿ 3 ಪ್ರಕರಣಗಳಲ್ಲಿ 147 ಲೀಟರ್ ಬಿಯರ್, 3 ಲೀಟರ್ ಐಎಂಎಲ್ ಸೇರಿ ಒಟ್ಟು 1,300 ಲೀಟರ್ ಮದ್ಯವನ್ನು ಪುರಸಭೆಯ ಕಸ ವಿಲೇವಾರಿ ಘಟಕದಲ್ಲಿ ಪರಿಸರ ಸ್ನೇಹಿ ರೀತಿಯಲ್ಲಿ ನಾಶಪಡಿಸಲಾಯಿತು ಎಂದು ಡಿವೈಎಸ್‌ಪಿ ದೀಪಕ್ ಎಸ್ ತಿಳಿಸಿದರು. ಈ ಸಂಧರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ನಾಗರಾಜು ಹೆಚ್.ಕೆ, ಶ್ರೀಲತ, ವೀರರೆಡ್ಡಿ, ಅಬಕಾರಿ ಉಪ ನಿರೀಕ್ಷಕರಾದ ಮನು ಬಿ.ಜೆ, ಪ್ರಭಾಕರ್, ತಾಲ್ಲೂಕು ಕಂದಾಯ ನಿರೀಕ್ಷಕ ನಾಗೇಶ್ ಸೇರಿದಂತೆ