ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಘಾಟಿಯ 6 ನೇ ತಿರುವಿನಲ್ಲಿ ಮುಂಡರಗಿ ಯಿಂದ ಮಂಗಳೂರಿಗೆ ಹೊರಟ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ 60 ಅಡಿ ಕಂದಕಕ್ಕೆ ಬಿದ್ದಿರುವ ಘಟನೆ ಶನಿವಾರ ಸಂಜೆ ನಡೆದಿದ್ದು ಮಾಹಿತಿ ಭಾನುವಾರ ಬೆಳಿಗ್ಗೆ 6 ಗಂಟೆಗೆ ಲಭ್ಯವಾಗಿದೆ. ಇದ್ರಿಂದ ವಾಹನಗಳು ಸಂಚರಿಸದೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹೈರಾಣಾದರು. ಪಿಕಪ್ ನಲ್ಲಿದ್ದ ಡ್ರೈವರ್ ಅಪಾಯದ ಮುನ್ಸೂಚನೆ ತಿಳಿದು ಪಿಕಪ್ ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಪ್ರಕರಣ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯವರು ತಡೆಗೋಡೆ ನಿರ್ಮಾಣದ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.