ಕಲಬುರಗಿ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಅಟೋಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ವೈದ್ಯ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿರುವ ಘಟನೆ ಜೇವರ್ಗಿ ಕ್ರಾಸ್ ಹತ್ತಿರ ನಸುಕಿನ ಜಾವ 4-30 ರ ಸುಮಾರಿಗೆ ನಡೆದಿದೆ. ಘಟನೆಯಲ್ಲಿ ಶಿವಮೊಗ್ಗದಲ್ಲಿ ಬಿ.ಎ.ಎಮ್.ಎಸ್ ಓದುತ್ತಿರುವ ವಿದ್ಯಾರ್ಥಿ ಮಹಮ್ಮದ ಶಾಹೀದ (21) ವರ್ಷ ಇವರಿಗೆ ಬೆಣ್ಣು ಮೂಳೆ ಮುರಿದು ಇತರಡೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ವಿದ್ಯಾರ್ಥಿ ಮಹಮ್ಮದ ಶಾಹೀದ ತಮ್ಮ ಸ್ವಗ್ರಾಮ ಚಿಂಚೋಳಿ ತಾಲ್ಲೂಕಿನ ಚಿಮ್ಮಾ ಗ್ರಾಮಕ್ಕೆ ತೆರಳಲು ರೈಲಿನ ಮೂಲಕ ಆಗಮಿಸಿ ಅಟೋದಲ್ಲಿ ಬಸ್ ನಿಲ್ದಾಣ ಕಡೆಗೆ ಹೋಗುವಾಗ ಕೆಎ 28 ಎಫ್ 2548 ಸಂಖ್ಯೆಯ ಬಸ್ ಡಿಕ್ಕಿ