ಮಡಿಕೇರಿ ನಗರದಲ್ಲಿ ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿದ್ದು ಅನಾಹುತಕ್ಕೆ ಬಾಯಿತೆರೆದು ಕುಳಿತಂತೆ ಕಾಣುತ್ತಿದೆ. ಇನ್ನೂ ಇಲ್ಲಿ ಸಾಗುವ ವಾಹನ ಸವಾರರಂತ್ತು ವಾಹನ ಚಲಾಯಿಸಲು ಹರಸಾಹಸವನ್ನೆ ಪಡಬೇಕು. ಐತಿಹಾಸಿಕ ದಸರಾಕ್ಕೆ ದಿನಗಣನೆ ಅರಂಭವಾಗಿದ್ರು ಮಳೆಯ ನೆಪ ಹೇಳಿಕೊಂಡು ದಿನ ಕಳೆಯುತ್ತಿದ್ದ ಮಡಿಕೇರಿ ನಗರಸಭೆ ವಿರುದ್ಧ ನಗರದ ನಿವಾಸಿಗಳು ಅಕ್ರೋಶ ವ್ಯಕಪಡಿಸುತ್ತಿದ್ದಾರೆ. ಪ್ರತಿ ದಸಾರ ಸಮಯದಲ್ಲೂ ಕೂಡ ಕರಗಗಳು ಹೋಗುವ ರಸ್ತೆಗಳು ಹಾಗೂ ದಶಮಂಟಪ ಸಾಗುವ ರಸ್ತೆಗಳನ್ನ ಹೊಂಡ ಗುಂಡಿಗಳನ್ನು ಮುಚ್ಚಿ ತೇಪೆ ಹಾಕುವ ಕೆಲಸಮಾತ್ರ ಆಗುತ್ತದೆ. ಪ್ರತಿವರ್ಷ ಕೂಡ ಇದನ್ನೆ ಮಾಡಿಕೊಂಡು ಬರಲಾಗುತ್ತಿದೆ. ತಾತ್ಕಾಲಿಕ ಪರಿಹಾರದ ಬದಲು ಶಾಶ್ವತವಾಗಿ ಪರಿಹಾರ ಕಲ್ಪಿಸಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀ