14 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿ ಮಗುವಿಗೆ ಜನ್ಮಕೊಟ್ಟಿರುವ ಘಟನೆ ಶಿವಮೊಗ್ಗದಲ್ಲಿ ಶುಕ್ರವಾರ ನಡೆದಿದ್ದು ಈ ಸಂಬಂಧ ಭಾನುವಾರ ಬೆಳಿಗ್ಗೆ 8 ಗಂಟೆಗೆ ಎಫ್ ಐ ಆರ್ ದಾಖಲಾಗಿದೆ. 9ನೇ ತರಗತಿಯೊಬ್ಬಳು ಹೊಟ್ಟೆ ನೋವೆಂದು ಶಾಲೆಗೆ ರಜೆ ಹಾಕಿದ್ದಳು. ಮೂರು ಎರಡು ದಿನದ ಬಳಿಕ ಬಾಲಕಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ತಕ್ಷಣ ಕುಟುಂಬಸ್ಥರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಮಗುವನ್ನು ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ. ವೈದ್ಯರ ಪ್ರಕಾರ 7 ತಿಂಗಳಿಗೆ ಜನ್ಮ ನೀಡಿದ್ದು ಮಗು ಒಂದೂವರೆ ಕೆಜಿ ಇದ್ದು ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ಬಾಲಕಿ ಮಗುವಿಗೆ ಜನ್ಮ ನೀಡುತ್ತಲ್ಲೆ ತಂದೆ, ತಾಯಿ ದಿಗ್ಙ್ರಂತರಾಗಿದ್ದಾರೆ.