ಯಲ್ಲಾಪುರ, ಯಲ್ಲಾಪುರ ಪಟ್ಟಣದ ತಿಲಕಚೌಕ್, ಕಟ್ಟಿಗೆ ಡಿಪೋ ಹಾಗೂ ಪೋಲಿಸ್ ಕ್ವಾರ್ಟರ್ ನಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಗಣಪತಿಯ ದರ್ಶನವನ್ನು ಶಾಸಕರಾದ ಶಿವರಾಮ ಹೆಬ್ಬಾರ್ ಪಡೆದರು. ಶ್ರೀ ಗಣಪತಿ ಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು ಹಾಗೂ ಈ ಸಂದರ್ಭದಲ್ಲಿ ಗಜಾನನೋತ್ಸವ ಸಮಿತಿಯ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.