ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿ ಬಿದರೆಕಟ್ಟೆ ಗ್ರಾಮ ವ್ಯಾಪ್ತಿಯ ಜ್ಞಾನಸಿರಿ ಕ್ಯಾಂಪಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಚತುಷ್ಪಥವಾಗಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಥಳ ಪರಿಶೀಲನೆ ನಡೆಸಿದರು. 2.40 ಕಿ.ಮೀ ಉದ್ದದ ಈ ರಸ್ತೆ ಸೋಪನಹಳ್ಳಿ ಗೇಟ್‌ನಿಂದ ಪ್ರಾರಂಭವಾಗಿ ಜ್ಞಾನಸಿರಿ ಕ್ಯಾಂಪಸ್ ಮೂಲಕ ಬಿದರೆಕಟ್ಟೆ ಗ್ರಾಮಕ್ಕೆ ಸಾಗಲಿದೆ. ಪ್ರಸ್ತಾವನೆಗೆ 40 ಕೋಟಿ ರೂ.ಗಳ ರೇಖಾ ಅಂದಾಜು ಸಿದ್ಧಪಡಿಸಿ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಭೂಸ್ವಾಧೀನದ ವಿವರಗಳನ್ನು 3 ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ಉಪವಿಭಾಗಾಧಿಕಾರಿ, ತಹಶೀಲ್ದಾರ್ ಸೇರಿದಂತೆ ಹಲವಾರು ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು..