ದೇವಸ್ಥಾನಗಳಲ್ಲಿ ವಿಗ್ರಹ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪಶ್ಚಿಮ ಬಂಗಾಳ ಮೂಲದ ಮೊಹಮ್ಮದ್ ರಬಿ, ಮೊಹಮ್ಮದ್ ಯುಸೂಫ್ ಹಾಗೂ ಮೊಹಮ್ಮದ್ ಬಾಬು ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 6.50 ಲಕ್ಷ ಮೌಲ್ಯದ 12 ವಿಗ್ರಹಗಳು ಪೂಜಾ ಸಾಮಗ್ರಿಗಳು ಆಟೋ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಸೆಪ್ಟೆಂಬರ್ 2ರಂದು ಮಧ್ಯಾಹ್ನ 12:30ಕ್ಕೆ ಮಾಹಿತಿ ನೀಡಿದ ಪೊಲೀಸರು,"ಕಾಡುಗೋಡಿ ವ್ಯಾಪ್ತಿಯಲ್ಲಿ ದೇವಸ್ಥಾನವೊಂದರ ಬಾಗಿಲು ಮುರಿದು ವಿಗ್ರಹಗಳು, ಹುಂಡಿಯಲ್ಲಿದ್ದ ಹಣ ಹಾಗೂ ಗಂಟೆಗಳನ್ನ ಆರೋಪಿಗಳು ಕದ್ದೊಯ್ದಿದ್ದರು" ಎಂದು ತಿಳಿಸಿದರು.