ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಭರ್ಜರಿ ಮಳೆಯಾಗಿದ್ದುಜನಜೀವನ ಅಸ್ತವ್ಯಸ್ತಗೊಂಡಿದೆ. ತಡರಾತ್ರಿ ಸುರಿದ ಮಳೆಯಿಂದಾಗಿ ಇಡೀ ನಗರ ನೀರಿನಲ್ಲಿ ನಿಂತಂತಾಗಿದೆ. ತಗ್ಗ ಪ್ರದೇಶಗಳಲ್ಲಿ ನಿಂತಿರೋ ನೀರಿನ ಪರಿಣಾಮ ಜನರು ರಾತ್ರಿ ಒಂದಷ್ಟು ಪರದಾಡಿದ್ದಾರೆ. ಅಂಡರ್ ಪಾಸ್ ಮತ್ತು ರಸ್ತೆ ಮೇಲಿರೋ ತಗ್ಗಿನಲ್ಲಿ ನೀರು ನಿಂತಿರೋ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ ಇನ್ನೂ ಬೆಳಿಗ್ಗೆ ಶಾಲಸ ಕಾಲೇಜಿಗೆ ತೆರಳುವವರು ಮಳೆಯಿಂದ ನಿರ್ಮಾಣವಾದ ಕೆಸರಿನಲ್ಲಿ ಓಡಾಡೋ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ಅವ್ಯವಸ್ಥೆ ವಿರುದ್ಧ ಆಟೋ ಚಾಲಕರು ಹಿಡಿಶಾಪ ಹಾಕಿದ್ದಾರೆ.