ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಭಾನುವಾರ ನಗರದೇವತೆಗಳ ಸಮ್ಮುಖದಲ್ಲಿ ಹಿಂದೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಉಡುಸಲಮ್ಮ, ಚಳ್ಳಕೆರಮ್ಮ ದೇವತೆಗಳನ್ನು ಭಾನುವಾರ ಸಂಜೆ ಉರಿಮೆ,ವಾದ್ಯಗಳೊಂದಿಗೆ ದೇವಾಲಯಗಳಿಂದ ಹೊರಡಿಸಿಕೊಂಡು ಹಿಂದೂ ಮಹಾಗಣಪತಿ ಸ್ಥಳಕ್ಕೆ ಕರೆದೊಯ್ಯೋದು ಅಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಶೇಷ ಪೂಜೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಹಾಗು ಭಕ್ತಾಧಿಗಳು ಭಾಗವಹಿಸಿದ್ದರು.