ಧಾರ್ಮಿಕ ಕ್ಷೇತ್ರಗಳ ವಿರುದ್ಧ ದಬ್ಬಾಳಿಕೆ ಶತ-ಶತಮಾನಗಳಿಂದಲ್ಲೂ ನಡೆಯುತ್ತ ಬಂದಿದ್ದು ಹಿಂದುಗಳು ಪೂಜಿಸುವ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಷಡ್ಯಂತ್ರ ಮಾಡುವವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು. ಹೊಸನಗರ ಪಟ್ಟಣದಲ್ಲಿ ಹಿಂದೂ ಮಹಾ ಧರ್ಮಸ್ಥಳ ಭಕ್ತಾಧಿಗಳು ವೇದಿಕೆಯಿಂದ ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ ಪುಣ್ಯ ಸನ್ನಿಧಿಗೆ ಕಳಂಕ ತಂದಿರುವವರ ವಿರುದ್ಧ ಹೊಸನಗರದ ಗಂಗಾಧರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಆವರಣದಲ್ಲಿ ಬಹಿರಂಗ ಸಭೆಯಲ್ಲಿ ಶನಿವಾರ ಸಂಜೆ 5 ಗಂಟೆಗೆ ಮಾತನಾಡಿದ ಅವರು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದರು.