ಬೇಲೂರು: ಹಾಡುಹಗಲೇ ಬೇಲೂರು ತಾಲ್ಲೂಕಿನ ಅರೇಹಳ್ಳಿ ಪಟ್ಟಣದ ಹೊರವಲಯ ಕಡೇಗರ್ಜೆ ಗ್ರಾಮದ ಮನೆಯೊಂದರ ಗೇಟ್ ಲಾಕ್ ಒಡೆಯುವ ಮೂಲಕ ಕಾಂಪೌಂಡ್ ಒಳ ಪ್ರವೇಶಿಸಿ ಕೊಠಡಿಯೊಳಗಿದ್ದ ಬೆಲೆ ಬಾಳುವ ಪಾತ್ರೆ ಹಾಗೂ ಇತರೆ ಕಬ್ಬಿಣದ ವಸ್ತುಗಳನ್ನು ಚಿಂದಿ ಆಯುವ ಇಬ್ಬರು ಯುವತಿಯರು ದೋಚಿದ್ದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವ ದೃಶ್ಯ ಕಂಡ ಮನೆಯವರು ಇದೀಗ ದಂಗಾಗಿದ್ದಾರೆ.ಹೌದು ಇಂತಹ ಘಟನೆ ನಡೆದಿರೋದು ಬೇಲೂರು ತಾಲೂಕಿನ ಅರೆಹಳ್ಳಿ ಪೋಲೀಸ್ ಠಾಣ ವ್ಯಾಪ್ತಿಯ ಕಡೇಗರ್ಜೆ ಗ್ರಾಮದ ಸಂದೀಪ್ ಎಂಬುವವರ ಮನೆಯಲ್ಲಿ, ಮೊನ್ನೆ ಶನಿವಾರ ನಡೆದ ಘಟನೆ ಇದಾಗಿದ್ದು ಸಿಸಿ ಕ್ಯಾಮೆರಾ ಪರಿಶೀಲಿಸಿದ ನಂತರ ದೃಢವಾಗಿ ಇಂದು ಬೆಳಕಿಗೆ ಬಂದಿದೆ.